ಕರಾವಳಿ ಪೊಲೀಸ್ ರಕ್ಷಣಾ ಬೋಟ್ ನ ನೌಕರರಿಬ್ಬರು ಸಮುದ್ರದಲ್ಲಿ ಮುಳುಗಿ ಮೃತ್ಯು



(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 21. ಕರಾವಳಿ ಪೊಲೀಸ್ ರಕ್ಷಣಾ ಬೋಟ್ ನ ನೌಕರರಿಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನೀಲೇಶ್ವರದ ತೈಕಡಪ್ಪುರ ಎಂಬಲ್ಲಿ ರವಿವಾರದಂದು ಸಂಜೆ ನಡೆದಿದೆ.







ಮೃತಪಟ್ಟ ನೌಕರರನ್ನು ರಾಜೇಶ್ ಮತ್ತು ಸನೀಶ್ ಎಂದು ಗುರುತಿಸಲಾಗಿದೆ. ಮೀನು ಹಿಡಿಯುತ್ತಿದ್ದ ಸಂದರ್ಭ ರಾಜೇಶ್ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿದ್ದು, ಉಳಿದವರು ಬೊಬ್ಬೆ ಹಾಕಿದಾಗ ಅಲ್ಲೇ ಇದ್ದ ಸನೀಶ್ ಸಮುದ್ರಕ್ಕೆ ಹಾರಿ ರಾಜೇಶ್ ನನ್ನು ರಕ್ಷಿಸಲೆತ್ನಿಸಿದ್ದು, ಈ ಸಂದರ್ಭದಲ್ಲಿ ಇಬ್ಬರು ಕೂಡಾ ನೀರುಪಾಲಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಕರಾವಳಿ ಪೊಲೀಸರು, ಸ್ಥಳೀಯರು ಭೇಟಿ ನೀಡಿ ಶೋಧಕಾರ್ಯ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.






error: Content is protected !!
Scroll to Top