ಬಾಣಂತಿಯ ಆರೋಗ್ಯ ತಪಾಸಣೆಗೆ ಬಂದಿದ್ದ ಸಿಬ್ಬಂದಿಯ ಮೇಲೆ ಸಾಕುನಾಯಿ ದಾಳಿ – ಮಾಲೀಕನ ವಿರುದ್ದ ಪ್ರಕರಣ ದಾಖಲು



(ನ್ಯೂಸ್ ಕಡಬ) newskadaba.com ಕೊಡಗು, ಆ. 18. ಬಾಣಂತಿಯನ್ನು ವಿಚಾರಿಸಲು ಹೋಗಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ನಾಯಿಯೊಂದು ಏಕಾಏಕಿ ದಾಳಿ ನಡೆಸಿದ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಪಾರಾಣೆ ಗ್ರಾಮದಲ್ಲಿ ನಡೆದಿದೆ.








ಇತ್ತೀಚೆಗಷ್ಟೇ ಹೆರಿಗೆಯಾಗಿದ್ದ ತಾಯಿ ಮತ್ತು ಮಗುವಿನ ಆರೋಗ್ಯ ತಪಾಸಣೆಗೆ ಪಾರಾಣೆ ಕಮ್ಯುನಿಟಿ ಹೆಲ್ತ್ ಆಫೀಸರ್ ಕೆ‌.ಕೆ ಭವ್ಯ ಅವರು ತೆರಳಿದ್ದರು. ಬಾಣಂತಿಯ ಆರೋಗ್ಯ ವಿಚಾರಿಸಿ ಹಿಂತಿರುಗುತ್ತಿದ್ದ ಸಂದರ್ಭ ಭವ್ಯ ಅವರ ಮೇಲೆ ಏಕಾಏಕಿ ನಾಯಿ ದಾಳಿ ನಡೆಸಿದ್ದು, ಭವ್ಯ ಅವರ ದೇಹದ ಹಲವು ಭಾಗಗಳಿಗೆ ಬಲವಾಗಿ ನಾಯಿ ಕಚ್ಚಿದ್ದು, ಪರಿಣಾಮ ಭವ್ಯ ಅವರು ಗಂಭೀರ ಗಾಯಗೊಂಡಿದ್ದಾರೆ. ಸದ್ಯ, ನಾಯಿ ಕಚ್ಚಿದ ವಿಚಾರ ತಿಳಿದ ನಾಪೋಕ್ಲು ಪೊಲೀಸರು ಸಾಕುನಾಯಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.






error: Content is protected !!
Scroll to Top