ಪತ್ನಿಗೆ ಚೂರಿಯಿರಿತ- ದೂರು ದಾಖಲು



(ನ್ಯೂಸ್ ಕಡಬ) newskadaba.com ಪುತ್ತೂರು, ಆ. 08. ತವರು ಮನೆಯಲ್ಲಿದ್ದ ಪತ್ನಿಗೆ ಆಕೆಯ ಪತಿ ಚೂರಿಯಿಂದ ಇರಿತಗೊಳಿಸಿರುವ ಘಟನೆ ಪುತ್ತೂರು ತಾಲೂಕಿನ ನೆಲ್ಲಿಕಟ್ಟೆ ಸಮೀಪದ ಬ್ರಹ್ಮನಗರ ಎಂಬಲ್ಲಿ ನಡೆದಿದೆ.







ಇವರಿಗೆ 6 ವರ್ಷದ ಹಿಂದೆ ಮದುವೆಯಾಗಿತ್ತು. ಆದರೆ ಮದುವೆಯಾಗಿ 2-3 ವರ್ಷಗಳಿಂದ ಆಕೆಯ ಪತಿ ಪ್ರಶಾಂತ್ ಮಾನಸಿಕ ಕಿರುಕುಳ ನೀಡುತ್ತಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಸಲಾಗಿದ್ದರೂ ಪತಿ ತೊಂದರೆ ನೀಡುವುದನ್ನು ಮುಂದುವರಿಸಿದ್ದಾನೆ ಎನ್ನಲಾಗಿದೆ. ಇನ್ನು ಆ. 06 ರಂದು ರಾತ್ರಿ ಮಹಿಳೆ ತನ್ನ ತವರು ಮನೆಯಲ್ಲಿ ಇರುವಾಗ ಅಲ್ಲಿಗೆ ಬಂದ ಪತಿ ಪ್ರಶಾಂತ್ ಅವ್ಯಾಚವಾಗಿ ಬೈದು ಚೂರಿಯಿಂದ ಕೈಗೆ ತಿವಿದು ಜೀವ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.






ಘಟನೆಯಿಂದ ಗಾಯಾಳು ಮಹಿಳೆ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆಕೆಯ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top