ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕಾ ದೋಣಿ ಪಲ್ಟಿ – 9 ಮಂದಿ ಮೀನುಗಾರರ ರಕ್ಷಣೆ



(ನ್ಯೂಸ್ ಕಡಬ) newskadaba.com ಬೈಂದೂರು,. 04. ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೃಹತ್ ಅಲೆಗೆ ಸಿಲುಕಿದ ದೋಣಿಯೊಂದು ಪಲ್ಟಿಯಾದ ಘಟನೆ ಕೊಡೇರಿ ಕಡಲ ತೀರದಲ್ಲಿ ಶುಕ್ರವಾರದಂದು ಸಂಭವಿಸಿದೆ.







ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಪಾಳ್ಯದರತೋಪ್ಲು ಪುರ್ಶುಯ್ಯನ ಪುಂಡಲೀಕ ಎಂಬವರ ಮಾಲಿಕತ್ವದ ಶ್ರೀ ದುರ್ಗಾಪರಮೇಶ್ವರಿ ದೋಣಿಯಲ್ಲಿ 9 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು, ಈ ವೇಳೆ ಕೊಡೇರಿ ಸಮುದ್ರ ತೀರದ ಸುಮಾರು 5 ನಾಟಿಕಲ್ ದೂರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಪಲ್ಟಿಯಾಗಿದೆ. ತಕ್ಷಣ ಇತರೆ ದೋಣಿಗಳ ಸಹಾಯದಿಂದ 9 ಮಂದಿ ಮೀನುಗಾರನ್ನು ರಕ್ಷಣೆ ಮಾಡಲಾಗಿರುವುದಾಗಿ ವರದಿಯಾಗಿದೆ.






error: Content is protected !!
Scroll to Top