ಜೆಸಿಬಿ ನುಗ್ಗಿಸಿ ಎಟಿಎಂ ಲೂಟಿಗೆ ಯತ್ನ – ಸೈರನ್ ಗೆ ಹೆದರಿ ಪರಾರಿಯಾದ ಕಳ್ಳರು

(ನ್ಯೂಸ್ ಕಡಬ) newskadaba.com ಸುರತ್ಕಲ್, ಆ. 04. ಇಲ್ಲಿನ ಸೌತ್ ಇಂಡಿಯನ್ ಬ್ಯಾಂಕ್ ಬ್ರ್ಯಾಂಚ್‌ ಪಕ್ಕದಲ್ಲಿರುವ ಎಟಿಎಂ ಕೇಂದ್ರದಲ್ಲಿ ಹಣ ಲೂಟಿಗೆ ಯತ್ನಿಸಿ ವಿಫಲವಾದ ಘಟನೆ ಶುಕ್ರವಾರದಂದು ನಡೆದಿದೆ.

ಕಳ್ಳರು ಎಟಿಎಂ ಕೇಂದ್ರಕ್ಕೆ ಜೆಸಿಬಿ ನುಗ್ಗಿಸಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ, ಸೈರನ್ ಆಗಿದ್ದನ್ನು ಕಂಡು ಓಡಿ ಹೋಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಡಿಸಿಪಿ ದಿನೇಶ್ ಕುಮಾರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವುದಾಗಿ ವರದಿಯಾಗಿದೆ.

Scroll to Top