ಮಗಳ ಮೇಲೆ ನಿರಂತರ ಅತ್ಯಾಚಾರ – ಆರೋಪಿ ತಂದೆ ಬಂಧನ



(ನ್ಯೂಸ್ ಕಡಬ) newskadaba.com ಬೀದರ್, ಜು. 31. ಮಗಳ ಮೇಲೆ ತಂದೆಯೇ ನಿರಂತರ ಅತ್ಯಾಚಾರ ನಡೆಸಿರುವ ಘಟನೆ ಬೀದರ್ ಬಳಿ ನಡೆದಿದೆ.







ಕೊರೋನಾ ಲಾಕ್ ಡೌನ್ ವೇಳೆ ಶಾಲೆಗೆ ರಜೆ ಘೋಷಿಸಿದ ನಂತರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಲವಂತವಾಗಿ ಅತ್ಯಾಚಾರ ನಡೆಸಿ ಯಾರಿಗೂ ವಿಷಯ ಹೇಳದಂತೆ ಬಾಲಕಿಗೆ ಆರೋಪಿ ತಂದೆ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. ಇತ್ತೀಚೆಗೆ ಪ್ರಕರಣ ಬೆಳಕಿಗೆ ಬಂದಿದ್ದು, ದೂರಿನ ಮೇರೆಗೆ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ತಿಳಿಸಿದ್ದಾರೆ.






error: Content is protected !!
Scroll to Top