ಪೊಲೀಸರ ಹೆಸರಿನಲ್ಲಿ ಬ್ಲಾಕ್ ಮೇಲ್ – ವಿದ್ಯಾರ್ಥಿಯಿಂದ ಹಣ ವಸೂಲಿ

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜು. 26. ಪೊಲೀಸರ ತನಿಖೆ ವಿಚಾರಣೆ ಶೈಲಿಯನ್ನು ಸರಿಯಾಗಿ ತಿಳಿದುಕೊಂಡು, ಇದನ್ನೇ ಬಂಡವಾಳವಾಗಿಟ್ಟುಕೊಂಡು ಆರೋಪಿಗಳು ಪ್ಯಾರಾಮೆಡಿಕಲ್​ ವಿದ್ಯಾರ್ಥಿಯೋರ್ವನಿಂದ ಹಣ ಸುಲಿಗೆ ಮಾಡಿರುವ ಘಟನೆ ವರದಿಯಾಗಿದೆ.

ಆರೋಪಿಗಳು ತಾವು ಪೊಲೀಸರು, ಸ್ಟೇಷನ್ ಗೆ ನಡೆಯಿರಿ ಎಂದು ಹೇಳಿ ವಿದ್ಯಾರ್ಥಿಯನ್ನು ಕಾರು ಹತ್ತಿಸಿ, ಬರೋಬ್ಬರಿ 1 ಲಕ್ಷದ 70 ಸಾವಿರ ಅಕೌಂಟ್​ಗೆ ಹಾಕಿಸಿಕೊಂಡಿದ್ದಾರೆ ಎಂದು ಪೊಲೀಸ್​ ವಿಚಾರಣೆ ವೇಳೆ ಬಯಲಿಗೆ ಬಂದಿದೆ.

ನಂತರ ಆರೋಪಿಗಳು ವಿಚಾರ ಬಾಯಿಬಿಟ್ಟರೆ ಕೊಲೆ ಮಾಡುವುದಾಗಿ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದು, ಸದ್ಯ ಆರೋಪಿಗಳನ್ನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

error: Content is protected !!
Scroll to Top