ಭಾರತೀಯ ವಿದ್ಯಾರ್ಥಿಯ ಥಳಿಸಿ ಹತ್ಯೆ…!

(ನ್ಯೂಸ್ ಕಡಬ)newskadaba.com  ಟೊರಂಟೊ, ಜು.25. ಕೆನಡಾದಲ್ಲಿ 24 ವರ್ಷದ ಭಾರತೀಯ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ದಾಳಿಕೋರರು ಆತನನ್ನು ಹತ್ಯೆಮಾಡಿ ಆತನಲ್ಲಿದ್ದ ಹಣವನ್ನು ದರೋಡೆಮಾಡಿರುವ ಪ್ರಕರಣ ಕೆನಡಾದಲ್ಲಿ ವರದಿಯಾಗಿದೆ. ಕೆನಡಾದಲ್ಲಿ ಶಿಕ್ಷಣ ಪಡೆಯುತ್ತಿರುವ ಗುರ್ವಿಂದರ್‌ ನಾಥ್‌ ಬಿಡುವಿನ ವೇಳೆಯಲ್ಲಿ ಆಹಾರ ಪೂರೈಸುವ ಕೆಲಸವನ್ನೂ ಮಾಡುತ್ತಿದ್ದ ಎನ್ನಲಾಗಿದೆ.

ಆತನ ಬಳಿ ಆಹಾರಕ್ಕೆ ಆರ್ಡರ್‌ ಮಾಡಿದ ಶಂಕಿತ ಆರೋಪಿಗಳು ಆತ ಅಲ್ಲಿಗೆ ಬರುತ್ತಿರುವಂತೆ ಮಾತಿನ ಚಕಮಕಿ ನಡೆಸಿ ಆತನ ಮೇಲೆ ಹಲ್ಲೆ ನಡೆಸಿ ಆತನಲ್ಲಿದ್ದ ಹಣ ಮತ್ತು ವಾಹನವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಪ್ರತಿರೋಧ ತೋರಿದಾಗ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹಣ ಮತ್ತು ವಾಹನದೊಂದಿಗೆ ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡಿದ್ದ ಗುರ್ವಿಂದರ್‌ ಸಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

Also Read  ➤ ಡ್ರಗ್ ಸೇವನೆ ಆರೋಪ ➤ತಾತ್ಕಾಲಿಕವಾಗಿ ಅಮಾನತುಗೊಂಡ ಭಾರತದ ನಂಬರ್ 1 ಓಟಗಾರ್ತಿ ದ್ಯುತಿ ಚಂದ್

error: Content is protected !!
Scroll to Top