`IRCTC’ ವೆಬ್ ಸೈಟ್ ಸರ್ವರ್ ಡೌನ್ ➤  ರೈಲು ಟಿಕೆಟ್ ಬುಕ್ ಮಾಡಲು ಪ್ರಯಾಣಿಕರ ಪರದಾಟ

(ನ್ಯೂಸ್ ಕಡಬ)newskadaba.com  ನವದೆಹಲಿ, ಜು.25. ರೈಲ್ವೆ ಟಿಕೆಟಿಂಗ್ ಸೇವೆಗಳನ್ನು ನೀಡುವ ಆನ್ಲೈನ್ ಪ್ಲಾಟ್ಫಾರ್ಮ್ ಐಆರ್ ಸಿಟಿಸಿ ತಾಂತ್ರಿಕ ಕಾರಣಗಳಿಂದಾಗಿ ವೆಬ್ ಸೈಟ್ ಡೌನ್ ಆಗಿದ್ದು, ಟಿಕೆಟ್ ಬುಕ್ ಮಾಡಲು ಪ್ರಯಾಣಿಕರು ಪರದಾಡುವಂತಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಟಿಕೆಟಿಂಗ್ ಸೇವೆ ಲಭ್ಯವಿಲ್ಲದ ಕಾರಣ ಟಿಕೆಟ್ ಬುಕ್ ಮಾಡಲು ಪ್ರಯಾಣಿಕರು ಇಂದು ಐಆರ್ ಸಿಟಿಸಿ ವೆಬ್ಸೈಟ್ನಲ್ಲಿ ಸಮಸ್ಯೆಗಳನ್ನು ಎದುರಿಸಿದರು.

ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗದಿದ್ದಾಗ ಮುಂಜಾನೆಯ ಸಮಯದಲ್ಲಿ ಕೆಲವು ಬಳಕೆದಾರರು ಈ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ. ಐಆರ್ ಸಿಟಿಸಿ ತಕ್ಷಣವೇ ಸಮಸ್ಯೆಯನ್ನು ಒಪ್ಪಿಕೊಂಡಿತು. ತಮ್ಮ ತಾಂತ್ರಿಕ ತಂಡವು ಸಮಸ್ಯೆಯನ್ನು ಪರಿಹರಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಳಕೆದಾರರಿಗೆ ಭರವಸೆ ನೀಡಿತು.

Also Read  ಮುಂಬೈ: ಶಾಪಿಂಗ್‌ ಮಾಲ್‌ ನಲ್ಲಿ ಬೆಂಕಿ ಅವಘಡ ➤3,500 ಜನರ ಸುರಕ್ಷತವಾಗಿ ಸ್ಥಳಾಂತರ...!

ಈ ಬಗ್ ಗೆಟ್ವೀಟ್ ಮಾಡಿರುವ ಐಆರ್ ಸಿಟಿಸಿ, “ತಾಂತ್ರಿಕ ಕಾರಣಗಳಿಂದಾಗಿ ಟಿಕೆಟಿಂಗ್ ಸೇವೆ ಲಭ್ಯವಿಲ್ಲ. ನಮ್ಮ ತಾಂತ್ರಿಕ ತಂಡವು ಸಮಸ್ಯೆಯನ್ನು ಪರಿಹರಿಸುತ್ತಿದೆ. ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿದ ಕೂಡಲೇ ನಾವು ತಿಳಿಸುತ್ತೇವೆ” ಎಂದು ಹೇಳಿದರು.

 

 

error: Content is protected !!