ಪಾರ್ಟ್ ಟೈಂ ಉದ್ಯೋಗ ನೀಡುವುದಾಗಿ ವಂಚನೆ- ಸೆನ್ ಠಾಣೆಯಲ್ಲಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 11. ಟೆಲಿಗ್ರಾಂ ಅಕೌಂಟ್ ನಿಂದ ಲಿಂಕ್‌ ಕಳುಹಿಸಿ ಪಾರ್ಟ್‌ ಟೈಂ ಉದ್ಯೋಗ ನೀಡುವುದಾಗಿ 5.43 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಮಂಗಳೂರಿನ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್ 29ರಂದು ದೂರುದಾರರಿಗೆ ಸಂದೇಶ ಕಳುಹಿಸಿದ ಅಪರಿಚಿತ ವ್ಯಕ್ತಿ ಅನಂತರ ಟಾಸ್ಕ್ ಗಳನ್ನು ನೀಡಿ, ಅದನ್ನು ಪೂರ್ಣಗೊಳಿಸಿದರೆ ಹಣ ನೀಡುವುದಾಗಿ ನಂಬಿಸಿದ್ದಾನೆ. ಮೊದಲ ಟಾಸ್ಕ್ ಗೆ ಹಣ ಹೂಡಿಕೆ ಮಾಡಿಸಿ ಅನಂತರ 1,237 ರೂ.ಗಳನ್ನು ದೂರುದಾರರ ಖಾತೆಗೆ ವರ್ಗಾಯಿಸಿದ್ದಾನೆ. ಇದನ್ನು ನಂಬಿದ ದೂರುದಾರರು ಇನ್ನಷ್ಟು ಲಾಭ ಗಳಿಸುವ ಉದ್ದೇಶದಿಂದ ಮುಂದಿನ ಟಾಸ್ಕ್ ಗಳನ್ನು ಮಾಡಿದ್ದಾರೆ. ಅಪರಿಚಿತ ವ್ಯಕ್ತಿ ದೂರುದಾರರ ಖಾತೆಯಿಂದ ಜು. 04ರಿಂದ ಜು. 8ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 5,43,151 ರೂ.ಗಳನ್ನು ಹಣ ವರ್ಗಾಯಿಸಿಕೊಂಡು ಯಾವುದೇ ಹಣ ವಾಪಸ್‌ ನೀಡದೆ ವಂಚಿಸಿದ್ದಾನೆ ಎನ್ನಲಾಗಿದೆ.

Also Read  ಮಂಗಳೂರು:ಕಂಕಣ ಸೂರ್ಯಗ್ರಹಣ ವಿಕ್ಷೀಸಿದ ಆಸಕ್ತರು

error: Content is protected !!
Scroll to Top