ಸಚಿವ ಮಂಕಾಳ್ ವೈದ್ಯರ ಅಭಿನಂದನಾ ಬ್ಯಾನರ್ ಗೆ ಹಾನಿ

(ನ್ಯೂಸ್ ಕಡಬ) newskadaba.com ಭಟ್ಕಳ, ಜೂ. 22. ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಮಂಕಾಳ ವೈದ್ಯರ ಅಭಿನಂದನಾ ಬ್ಯಾನರ್ ನ್ನು ಕಿಡಿಗೇಡಿಗಳು ಹರಿದು ಕಿತ್ತೆಸೆದ ಘಟನೆ ಬೆಳಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿರುವುದು ವರದಿಯಾಗಿದೆ.

ಸಚಿವರ ಅಭಿಮಾನಿಗಳು  ಅಭಿನಂದಿಸಿ ತಾಲೂಕಿನ ವಿವಿಧೆಡೆ ಬ್ಯಾನರ್ ಅಳವಡಿಸಿದ್ದರು. ಈ ಪೈಕಿ ಬೆಳಕೆ ಗ್ರಾ.ಪಂ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಬ್ಯಾನರ್ ನ್ನು ಯರೊ ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಈ ಕುರಿತು  ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Scroll to Top