ಹಾಡುತ್ತಿರುವಾಗಲೇ ಕುಸಿದುಬಿದ್ದು ಖ್ಯಾತ ರ್ಯಾಪರ್ ಮೃತ್ಯು



(ನ್ಯೂಸ್ ಕಡಬ) newskadaba.com ಟೆಕ್ಸಾಸ್, ಜೂ. 19. ಅಮೇರಿಕಾದ ಖ್ಯಾತ ರಾಪರ್ ಗಾಯಕನೋರ್ವ ಪ್ರದರ್ಶನ ನೀಡುತ್ತಿದ್ದ ಸಂಸರ್ಭ ಕುಸಿದುಬಿದ್ದ ಘಟನೆ ನಡೆದಿದೆ.







ಮೃತ ಗಾಯಕನನ್ನು ಪೋಕಿ ಅಕಾ ಮಿಲ್ಟನ್ ಪೊವೆಲ್ (45) ಎಂದು ಗುರುತಿಸಲಾಗಿದೆ. ಇವರು ವೇದಿಕೆಯ ಮೇಲೆ ಬೀಳುವ ಮೊದಲು ರಾಪ್ ಮಾಡುವಾಗ ನಿಯಂತ್ರಣ ಕಳೆದುಕೊಂಡು ಏಕಾಏಕಿ ಕುಸಿದು ಬಿದ್ದು ಪ್ರಜ್ಞಾಹೀನನಾಗುವ ವಿಡೀಯೋ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದ್ಯರಾತ್ರಿ ಕುಸಿದು ಬಿದ್ದರೂ ತಕ್ಷಣ ವೈದ್ಯರು ಬಂದು ತಕ್ಷಣ ಪ್ರಥಮ ಚಿಕಿತ್ಸೆ ನೀಡಿದರೂ ಬದುಕುಳಿಯಲಿಲ್ಲ ಎಂದು ವರದಿಯಾಗಿದೆ.






error: Content is protected !!
Scroll to Top