ಮಹಿಳಾ ಮತ್ತು ಪುರುಷ ಡ್ರೈವರ್‌ ಕೆಲಸಕ್ಕೆ ಅರ್ಜಿ ಅಹ್ವಾನ ➤ 1.37 ಲಕ್ಷ ಸ್ಯಾಲರಿಯ ಈ ಉದ್ಯೋಗದ ಬಗ್ಗೆ ನಿಮಗೆ ಗೊತ್ತೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.03. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುರೋಪ್ ದೇಶದಲ್ಲಿ ಡ್ರೈವರ್ ಗಳ ನೇಮಕಾತಿಗೆ ಆಸಕ್ತ ಪುರುಷ ಹಾಗೂ ಮಹಿಳಾ ಡ್ರೈವರ್ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಭಾರೀ ಟ್ರಕ್ ಹಾಗೂ ಟ್ರೈಲರ್ ಡ್ರೈವಿಂಗ್ ಉದ್ಯೋಗಕ್ಕೆ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಜೂನ್ 11 ರೊಳಗೆ ನಗರದ ಅಶೋಕ ನಗರದಲ್ಲಿರುವ ಉರ್ವಾ ಮಾರುಕಟ್ಟೆ ಕಟ್ಟಡದ 2ನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಇದೇ ಜೂನ್ 20 ಹಾಗೂ 21ರಂದು ಉದ್ಯೋಗದಾತರಿಂದ ನೇರ ಸಂದರ್ಶನ ನಡೆಯಲಿದೆ. ಮೂಲವೇತನ 1,07,000 ರೂ.ಗಳಿಂದ 1,34,000 ರೂ.ಗಳು (1200-1500 ಯುರೋಗಳು) ಪ್ರತಿ ತಿಂಗಳಿಗೆ ನೀಡಲಾಗುವುದು. ವಸತಿ, ವಿಮೆ ಇತ್ಯಾದಿ ಸವಲತ್ತಿನೊಂದಿಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ ನೀಡಲಾಗುವುದು ಹಾಗೂ ಇಂಗ್ಲಿಷ್ ಭಾಷೆ ಕಡ್ಡಾಯವಾಗಿ ತಿಳಿದಿರಬೇಕು.

Also Read  ಕೊಂಬಾರು ಗ್ರಾಮಸ್ಥರಿಗೆ ಕೊನೆಗೂ ಬಂತು ನೆಟ್ವರ್ಕ್ ಭಾಗ್ಯ ➤ ಕೊಂಬಾರು ಹಾಗೂ ಸಿರಿಬಾಗಿಲಿನಲ್ಲಿ ಜಿಯೋ ಟವರ್ ಗೆ ಸಾಂಕೇತಿಕ ಚಾಲನೆ

ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಲಹೆಗಾರರು ಮೊ. ಸಂಖ್ಯೆ 9141584259ಗೆ ಕರೆ ಮಾಡಿ ಸಂರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top