ರೈಲಿನಡಿ ಸಿಲುಕಿ ಮೃತಪಟ್ಟ ಕಾರ್ಮಿಕ.!

(ನ್ಯೂಸ್ ಕಡಬ)newskadaba.com ರಾಯಚೂರು,ಮೇ.29 ರಾಯಚೂರಿನಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ರೈಲು ಅಪಘಾತ ಸಂಭವಿಸಿ ವ್ಯಕ್ತಿಯ ರುಂಡ ಮುಂಡ ಬೇರ್ಪಟ್ಟ ಭೀಕರ ಘಟನೆ ನಡೆದಿದೆ.ಮೃತನನ್ನು ನಾಗರಾಜ್ (32) ಎಂದು ಗುರುತಿಸಲಾಗಿದೆ. ರಾಯಚೂರಿನ ಶಕ್ತಿನಗರದ ಆರ್ ಟಿ ಪಿಎಸ್ ವಿದ್ಯುತ್ ಕೇಂದ್ರದಲ್ಲಿ ಘಟನೆ ನಡೆದಿದೆ.

ಕಲ್ಲಿದ್ದಲ್ಲು ಸ್ಯಾಂಪಲ್ ತೆಗೆಯುವ ಕೆಲಸ ಮಾಡುತ್ತಿದ್ದ ಇವರು ಆಕಸ್ಮಿಕವಾಗಿ ರೈಲಿನಡಿಗೆ ಸಿಲುಕಿದ್ದಾರೆ ಎನ್ನಲಾಗಿದೆ. ರೈಲು ಕುತ್ತಿಗೆ ಮೇಲೆ ಹರಿದ ಪರಿಣಾಮ ರುಂಡ ಹಾಗೂ ಮುಂಡ ಬೇರ್ಪಟ್ಟು ಮೃತಪಟ್ಟಿದ್ದಾರೆ ಎನ್ನಲಾಗಿದೆ.

 

Scroll to Top