ರಾಜ್ಯದಲ್ಲಿ ಫ್ರೀ ಬಸ್ ಸ್ಕೀಂ ಜಾರಿಗೆ ದಿನಗಣನೆ ಶುರು.!

(ನ್ಯೂಸ್ ಕಡಬ)newskadaba.comಬೆಂಗಳೂರು,ಮೇ.24 ರಾಜ್ಯದಲ್ಲಿ ಫ್ರೀ ಬಸ್ ಸ್ಕೀಂ ಜಾರಿಗೆ ದಿನಗಣನೆ ಶುರುವಾಗಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣದ ಯೋಜನೆ ಜಾರಿಗೆ ಸಾರಿಗೆ ಇಲಾಖೆ ಸಿದ್ಧತೆ ನಡೆಸುತ್ತಿದೆ.

ರಾಜ್ಯದಲ್ಲಿ ಫ್ರೀ ಬಸ್ ಸ್ಕೀಂ ಕಲ್ಪಿಸಲು ಸರ್ಕಾರ ಸಿದ್ದತೆ ನಡೆಸಿದ್ದು, ಫ್ರೀ ಬಸ್ ಭಾಗ್ಯಕ್ಕೆ ಕಂಡೀಷನ್ ಹಾಕಿಯೇ ಫ್ರೀ ಬಸ್ ಸೇವೆ ನೀಡಲು ಪ್ಲಾನ್ ಮಾಡಿದೆ.ಶೀಘ್ರದಲ್ಲೇ ಷರತ್ತು ಮತ್ತು ನಿರ್ಬಂಧ ಗಳಿಗ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಆಗಲಿದ್ದು, ಒಂದೆರಡು ದಿನದಲ್ಲಿ ಫ್ರೀ ಬಸ್ ಸ್ಕೀಂ ಮಾರ್ಗಸೂಚಿಯು, ಸರ್ಕಾರದ ಕೈ ಸೇರಲಿದೆ.

 

Scroll to Top