ಡಿಜಿ-ಐಜಿಪಿಯಾಗಿ  ಹಿರಿಯ ಐಪಿಎಸ್‌ ಅಧಿಕಾರಿ ಆಲೋಕ್‌ ಮೋಹನ್‌ ಅಧಿಕಾರ ಸ್ವೀಕಾರ 

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.23 ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್‌ ಅಧಿಕಾರಿ ಆಲೋಕ್‌ ಮೋಹನ್‌ ಅಧಿಕಾರ ಸ್ವೀಕರಿಸಿದರು.ಸಿಬಿಐ ನಿರ್ದೇಶಕರಾಗಿ ನೇಮಕಗೊಂಡ ಪ್ರವೀಣ್‌ ಸೂದ್‌ ಅವರು ಆಲೋಕ್‌ ಮೋಹನ್‌ ಅವರಿಗೆ ಬ್ಯಾಟನ್‌ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಡಿಜಿ- ಐಜಿಪಿಯಾಗಿದ್ದ ಪ್ರವೀಣ್‌ ಸೂದ್‌ ಕೇಂದ್ರೀಯ ತನಿಖಾ ತನಿಖಾ ದಳದ (ಸಿಬಿಐ) ನಿರ್ದೇಶಕರಾಗಿ ನೇಮಕಗೊಂಡಿದ್ದು, ಅವರಿಗೆ ಇಲಾಖೆಯಿಂದ ಬೀಳ್ಕೊಡುಗೆ ಪಥಸಂಚಲನ ಮೂಲಕ ಗೌರವಿಸಿ ಅವರನ್ನು ಈ ಹುದ್ದೆಯಿಂದ ಬಿಡುಗಡೆ ಮಾಡಲಾಯಿತು.ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಆಲೋಕ್‌ ಮೋಹನ್‌ ಅವರಿಗೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ (ಡಿಜಿ-ಐಜಿಪಿ) ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

 

 

Scroll to Top