ಕಾರ್ಕಳ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿಯಾದ ವಾಹನ    ➤ ಆರು ಮಂದಿಗೆ ಗಾಯ

(ನ್ಯೂಸ್ ಕಡಬ)newskadaba.com ಕಾರ್ಕಳ, ಮೇ.22. ತೀರ್ಥಯಾತ್ರೆಗೆ ಮುಗಿಸಿ ಊರಿಗೆ ಹಿಂತಿರುಗುತ್ತಿದ್ದ ಪ್ರಯಾಣಿಕರು ಚಲ್ಲಿಸುತ್ತಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ‌ಹೊಡೆದಿರುವ ಘಟನೆ ಅಂಡಾರು ಎಂಬಲ್ಲಿ ಸಂಭವಿಸಿದೆ.

ಧರ್ಮಸ್ಥಳದಿಂದ ಕಾರವಾರದ ಕಡೆಗೆ ಹೋಗುತ್ತಿದ್ದ ಬೊಲೋರಾ ಜೀಪು ನಸುಕಿನ ಜಾವ 4.00ವೇಳೆಗೆ ಅಂಡಾರಿನಲ್ಲಿ ಮರವೊಂದಕ್ಕೆ‌ ಢಿಕ್ಕಿ ಹೊಡೆದಿದ್ದು, ಅದರಲ್ಲಿ ಇದ್ದ ಆರು ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು. ಘಟನೆ ಕುರಿತು ಮಾಹಿತಿ ಪಡೆದಿದ್ದ 108 ಆಂಬುಲೆನ್ಸ್ ನ ಸಿಬ್ಬಂದಿಯರು ಗಾಯಾಳುಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

 

Scroll to Top