ಮಂಗಳೂರಿನಲ್ಲಿ ಗೂಡ್ಸ್ ರೈಲಿನಡಿ ಬಿದ್ದು 17 ಎಮ್ಮೆಗಳು ಮೃತ್ಯು

(ನ್ಯೂಸ್ ಕಡಬ) newskadaba.com.ಮಂಗಳೂರು,  ಮೇ.15. ಜೋಕಟ್ಟೆ ಅಂಗರಗುಂಡಿ ಬಳಿ ಗೂಡ್ಸ್ ರೈಲಿನಡಿ ಬಿದ್ದು 17 ಎಮ್ಮೆಗಳು ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ 12 ಗಂಟೆಯ ಸುಮಾರಿಗೆ ಸಂಭವಿಸಿದೆ.

ಗೂಡ್ಸ್ ರೈಲು ಕಂಕನಾಡಿ ಕಡೆಯಿಂದ ಎಂಸಿಎಫ್ ಕಡೆ ಹೋಗುತ್ತಿದ್ದಾಗ ಈ ಅವಘಢ ಸಂಭವಿಸಿದೆ. ಕದ್ರಿ ಅಗ್ನಿಶಾಮಕ ದಳದವರು ಮೂರು ಎಮ್ಮೆಗಳನ್ನು ರಕ್ಷಿಸಿದ್ದು, ಸತತ ಮೂರು ಗಂಟೆ ಕಾರ್ಯಾಚರಣೆ ನಡೆದಿದೆ ಎಂದು ತಿಳಿದು ಬಂದಿದೆ.

Scroll to Top