ಬಸ್ಸು ಮತ್ತು ಗೋಡೆ ಮಧ್ಯೆ ಸಿಲುಕಿ ನಿರ್ವಾಹಕ ಮೃತ್ಯು..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.10 ಬಿಎಂಟಿಸಿ ಯಲಹಂಕ ಡಿಪೊ- 30ರಲ್ಲಿ ಎಲೆಕ್ಟ್ರಿಕ್ ಬಸ್ ಗೋಡೆಗೆ ಡಿಕ್ಕಿ ಹೊಡೆದಿದ್ದು, ಬಸ್ಸು ಮತ್ತು ಗೋಡೆ ಮಧ್ಯೆ ಸಿಲುಕಿ ನಿರ್ವಾಹಕ ಸೋಮಶೇಖರಯ್ಯ (59) ಮೃತಪಟ್ಟಿದ್ದಾರೆ. ಕರ್ತವ್ಯ ಮುಗಿಸಿ ಡಿಪೊಗೆ ಬಂದಿದ್ದ ಅವರು, ಕಚೇರಿಯಲ್ಲಿ ಟಿಕೆಟ್ ಹಣ ಜಮೆ ಮಾಡಿ ವಾಪಸು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಸೋಮಶೇಖರಯ್ಯ ಅವರಿಗೆ ಗುದ್ದಿಕೊಂಡು ಮುಂದಕ್ಕೆ ಹೋಗಿದ್ದ ಬಸ್‌, ಗೋಡೆಗೆ ಡಿಕ್ಕಿ ಹೊಡೆದಿತ್ತು. ಬಸ್‌ ಹಾಗೂ ಗೋಡೆ ನಡುವೆ ಸಿಲುಕಿ ಸೋಮಶೇಖರಯ್ ದೇಹ ಜಜ್ಜಿಯಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದರು.’ಅಪಘಾತದ ಬಳಿಕ ಚಾಲಕ ಪರಾರಿಯಾಗಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.

Also Read   ಪುತ್ತೂರು : ಹಣದ ವಿಚಾರದಲ್ಲಿ ಅಪಹರಣಗೈದು ಕೊಲೆ ಬೆದರಿಕೆ !

 

 

 

 

error: Content is protected !!
Scroll to Top