ಇನ್ನೋವಾಗೆ ಢಿಕ್ಕಿಯಾಗಿ ಪಲ್ಟಿಯಾದ ಪ್ರವಾಸಿ ಬಸ್

(ನ್ಯೂಸ್ ಕಡಬ)newskadaba.com ಯಲ್ಲಾಪುರ, ಏ.29. ಇನ್ನೋವಾ ಕಾರು ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ ಬಸ್ ಪಲ್ಟಿಯಾದ ಘಟನೆ ಯಲ್ಲಾಪುರ ತಾಲೂಕಿನ ಆರತಿಬೈಲ್ ಕ್ರಾಸ್ ಬಳಿ ನಡೆದಿದೆ.

ಪ್ರವಾಸಕ್ಕೆಂದು ಯಲ್ಲಾಪುರ ಕಡೆಯಿಂದ ಗೋಕರ್ಣ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ಮಂಗಳೂರಿನಿಂದ ಮುಂಬೈ ಕಡೆ ಚಲಿಸುತ್ತಿದ್ದ ಇನೋವಾ ಕಾರ್‌ ನಡುವೆ ಅಪಘಾತವಾಗಿದ್ದು, ಅಪಘಾದಿಂದಾಗಿ ಖಾಸಗಿ ಬಸ್ ಹೆದ್ದಾರಿಯ ಪಕ್ಕದಲ್ಲಿ ಪಲ್ಟಿಯಾಗಿ ಬಿದ್ದಿದೆ. ಅದೃಷ್ಟವಶಾತ್‌ ಬಸ್‌ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

Scroll to Top