ಕಡಬ:ಕಂಠ ಪೂರ್ತಿ ಕುಡಿದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ವ್ಯಕ್ತಿ

(ನ್ಯೂಸ್ ಕಡಬ)newskadaba.com ಕಡಬ, ಏ,20. ಗ್ರಾಮಕರಣಿಕರೊಬ್ಬರು  ಕಂಠ ಪೂರ್ತಿ ಕುಡಿದು ಬಾರ್ ಮುಂದೆಯೇ  ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ  ಘಟನೆ ಕಡಬ ಸಮೀಪದ ಕಳಾರದಿಂದ ವರದಿಯಾಗಿದೆ.

ಕಂಠ ಪೂರ್ತಿ ಬಿದ್ದಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಕೆಲ ಸಮಯದ ಬಳಿಕ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳೇ ಆತನನ್ನು ಮನೆಗೆ ತಲುಪಿಸಿರುವುದಾಗಿ ತಿಳಿದು ಬಂದಿದೆ.

15 ದಿನಗಳ ಹಿಂದೆ  ಕುಡಿದು ಬಿದ್ದು ಕಣ್ಣಿಗೆ ಪೆಟ್ಟಾಗಿ ಚಿಂತ ಜನಕ  ಸ್ಥಿತಿಯಲ್ಲಿ ಇದ್ದ ಇವರು ಕಡಬ ಆಸ್ಪತ್ರೆಗೆ ದಾಖಲಾಗಿ  ಹೆಚ್ಚಿನ ಚಿಕಿತ್ಸೆಗಾಗಿ  108 ಅಂಬುಲೆನ್ಸ್  ಮೂಲಕ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎನ್ನಲಾಗಿದೆ.

 

 

Scroll to Top