ಆಕಸ್ಮಿಕ ಕಾಲುಜಾರಿ ಹೊಳೆಗೆ ಬಿದ್ದು ವ್ಯಕ್ತಿ ಮೃತ್ಯು 

(ನ್ಯೂಸ್ ಕಡಬ)newskadaba.com ಕಾರ್ಕಳ, ಏ.01. ಮುಂಬೈಯಲ್ಲಿ ಹೋಟೆಲ್ ಉದ್ಯಮಿಯಾಗಿದ್ದ ಮುಂಡ್ಕೂರು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಿವಾಸಿ ರಮೇಶ್ ಸಪಳಿಗ (68) ವರ್ಷ ಎಂಬವರ ಮೃತದೇಹ ಮುಂಡ್ಕೂರು ಶಾಂಭವಿ ಹೊಳೆಯಲ್ಲಿ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

ವಿಪರೀತ ಮಧ್ಯಪಾನದ ಚಟ ಹೊಂದಿದ್ದ ರಮೇಶ್ ಸಪಳಿಗ ಕೆಲವು ಸಮಯದ ಹಿಂದೆ ಸಹೋದರ ಅನಾರೋಗ್ಯದ ಪೀಡಿತರಾದ ಹಿನ್ನಲೆ ಊರಿಗೆ ಬಂದವರು ವಾಪಸು ಹೋಗಿರಲಿಲ್ಲ. ಮಧ್ಯಪಾನ ಮಾಡಲೆಂದು ಮನೆಯಿಂದ ಹೋದವರು ವಾಪಸ್ ಮನೆಗೆ ಬಂದಿರಲಿಲ್ಲ ಎನ್ನಲಾಗಿದೆ.

 

Scroll to Top