LPG ಗ್ಯಾಸ್‌ ಸೋರಿಕೆಯಾಗಿ ಭೀಕರ ಅಗ್ನಿ ದುರಂತ ➤ ಏಳು ಮಂದಿ ಕಾರ್ಮಿಕರು ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.01. ಗ್ಯಾಸ್‌ ಸೋರಿಕೆಯಾಗಿ ನಡೆದ ಅಗ್ನಿ ಅವಘಡದಲ್ಲಿ ಏಳು ಮಂದಿ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪದ ಮೇಡಹಳ್ಳಿಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

ಶೆಡ್ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬಿಹಾರ ಮತ್ತು ಉತ್ತರಪ್ರದೇಶದಿಂದ ಬಂದಿದ್ದ 7 ಮಂದಿ ಶೆಡ್‌ ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಡ್ಯಾಮೇಜ್ ಆಗಿದ್ದ ಪೈಪ್‌ ನಿಂದ ಎಲ್‌ಪಿಜಿ ಗ್ಯಾಸ್ ಸೋರಿಕೆಯಾಗಿ ಅಗ್ನಿ ಅನಾಹುತ ನಡೆದಿದ್ದು ಅವಘಡ ಸಂಭವಿಸಿದ ದಿನ ಬೆಳಿಗ್ಗೆ 3.55 ರ ಸುಮಾರಿಗೆ ಎಲ್ಲಾ ಎಂಟು ಮಂದಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ತಿಳಿದುಬಂದಿದೆ.

 

Scroll to Top