ಕ್ಯಾಂಡಲ್ ಫ್ಯಾಕ್ಟರಿ ಆಕಸ್ಮಿಕವಾಗಿ ಬೆಂಕಿಗಾಹುತಿ

(ನ್ಯೂಸ್ ಕಡಬ) newskadaba.com ಕಾರ್ಕಳ, ಮಾ. 23. ಕ್ಯಾಂಡಲ್ ಫ್ಯಾಕ್ಟರಿಯೊಂದು ಅಗ್ನಿ ಆಹುತಿಗೊಳಗಾಗಿ ಸಂಪೂರ್ಣವಾಗಿ ಭಸ್ಮಗೊಂಡಘಟನೆ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಚಚ್೯ ಪರಿಸರದಲ್ಲಿ ಸಂಭವಿಸಿದೆ.


ನಿಟ್ಟೆ ಗ್ರಾಮ ಪಂಚಾಯತ್ ನ ಅತ್ತೂರು ಚರ್ಚ್ ಬಳಿ ಕ್ಯಾಂಡಲ್ ತಯಾರಿಕಾ ಕೇಂದ್ರ ದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು, ಸುಮಾರು ಸತತ ಎರಡು ಅಗ್ನಿಶಾಮಕ ವಾಹನಗಳಿಂದ ಸುಮಾರು 03 ಗಂಟೆ ಕಾರ್ಯಾಚರಣೆ ಮಾಡಿ ಬೆಂಕಿಯನ್ನು ನಂದಿಸಲಾಗಿದೆ.

Scroll to Top