ವಿಷ ಸೇವಿಸಿ ಯುವಕ ಮೃತ್ಯು…!

Death, deadbody, Waterfall

(ನ್ಯೂಸ್ ಕಡಬ) newskadaba.com ಕಾರ್ಕಳ, ಮಾ. 15. ವಿಷ ಸೇವಿಸಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಕಾರ್ಕಳದಲ್ಲಿ ಸಂಭವಿಸಿದೆ.

ಮೃತ ಯುವಕನನ್ನು ಹಿರಿಯಂಗಡಿಯ ಪ್ರಜ್ವಲ್‌ ದೇವಾಡಿಗ(18) ಎಂದು ಗುರುತಿಸಲಾಗಿದೆ. ಈತನ ತಂದೆ ತಾಯಿ ಹಾಗೂ ಸಹೋದರ ಕಾರ್ಕಳ ಮಾರಿಗುಡಿಯ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ, ಮನೆಯಲ್ಲಿ ಒಬ್ಬನೇ ಇದ್ದ ಪ್ರಜ್ವಲ್‌ ವಿಷ ಸೇವಿಸಿದ್ದ. ಈ ಕುರಿತು ಪ್ರಜ್ವಲ್‌ನ ಗೆಳೆಯ ಮಲ್ಲಿಕಾರ್ಜುನ ಎಂಬಾತ ಪ್ರಜ್ವಲ್ ಅಣ್ಣ ಉಜ್ವಲ್‌ಗೆ ಕರೆಮಾಡಿ ವಿಷಯ ತಿಳಿಸಿದ್ದನು. ತಕ್ಷಣವೇ ಪ್ರಜ್ವಲ್‌ ನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಪ್ರಜ್ವಲ್‌ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top