➤ ಕಡಬ ನಾಯಿಯನ್ನು ಹೊತ್ತೊಯ್ದ ಚಿರತೆ

(ನ್ಯೂಸ್ ಕಡಬ) newskadaba.com. ಕಡಬ . 13. ಸಾಕು ನಾಯಿಯನ್ನು ಚಿರತೆಯೊಂದು ತಡರಾತ್ರಿ ಹೊತ್ತೊಯ್ದ ಘಟನೆ ಕಡಬ ತಾಲೂಕಿನ  ಸುಬ್ರಹ್ಮಣ್ಯ ಸಮೀಪದ ಕೈಕಂಬ ದಲ್ಲಿ ನಡೆದಿದೆ.

ಕೈಕಂಬ ಬಳಿಯ ವೆಂಕಟಪುರ ಲೀಲಾವತಿ ದೇವರಾಜ್ ಅವರ ಮನೆಯ ಸಾಕು ನಾಯಿಯನ್ನು ಚಿರತೆ ದಾಳಿ ನಡೆಸಿ ಹೊತ್ತೊಯ್ದಿದೆ. ನಾಯಿಯ ಕೂಗಾಟ ಕೇಳಿ ಕೆಲಸದಾಳು ಎಚ್ಚರಗೊಂಡಿದ್ದು, ಕೆಲಸದಾಳುವಿನ ಎದುರಲ್ಲೇ ಚಿರತೆ ನಾಯಿ ಮೇಲೆ ದಾಳಿ ನಡೆಸಿರುವುದು ಮನೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

Scroll to Top