➤ ಚೀನಾದ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಆಯ್ಕೆ

(ನ್ಯೂಸ್ ಕಡಬ) newskadaba.com. ಚೀನಾ. ಮಾ 11. ಸಂಸತ್ತು ಸರ್ವಾನುಮತದಿಂದ ಕ್ಸಿ-ನ್ ಪಿಂಗ್ ಅವರನ್ನು ಅಧ್ಯಕ್ಷರನ್ನಾಗಿ  ಆಯ್ಕೆ ಮಾಡಿತು. 2, 952 ಮತಗಳನ್ನು ಪಡೆದ ಅವರು ಮೂರನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ಆಯ್ಕೆಯಾದರು.

ಅಲ್ಲದೆ ದೇಶದ ಕೇಂದ್ರ ಮಿಲಿಟರಿ ಆಯೋಗದ ಮುಖ್ಯಸ್ಥರಾಗಿಯೂ ಕ್ಸಿ-ಜಿನ್ ಪಿಂಗ್ ಪುನರಾಯ್ಕೆಗೊಂಡರು. ಇದೇ ವೇಳೆ ಮೂರನೇ ಅವಧಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕ್ಸಿ-ಜಿನ್ ಪಿಂಗ್, ದೇಶದ ಸಂವಿಧಾನಕ್ಕೆ ಬದ್ದನಾಗಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದರು.

error: Content is protected !!

Join the Group

Join WhatsApp Group