ಪುತ್ತೂರು: ಶಾಲಾ ಕೊಠಡಿಯ ಬೀಗ ಮುರಿದು 16 ಬ್ಯಾಟರಿಗಳನ್ನು ಕದ್ದೊಯ್ದ ಕಳ್ಳರು ➤ ದೂರು ದಾಖಲು

Theft, crime, Robbery

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 10. ಇಲ್ಲಿನ ಕೋಡಿಂಬಾಡಿಯ ಶಾಂತಿನಗರ ಸರಕಾರಿ ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿಗೆ ನುಗ್ಗಿದ ಕಳ್ಳರು ಯುಪಿಎಸ್‌ನ ಹಳೆಯ ಬ್ಯಾಟರಿಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

ಶಾಲೆಯ ಒಂದನೇ ಅಂತಸ್ತಿನ ಕಂಪ್ಯೂಟರ್ ಕೊಠಡಿಯಲ್ಲಿ ಇರಿಸಲಾಗಿದ್ದ ಕಂಪ್ಯೂಟರಿನ ಹಳೆಯ 16 ಬ್ಯಾಟರಿಗಳನ್ನು ಕಳವು ಮಾಡಲಾಗಿದೆ ಎಂದು ಮುಖ್ಯೋಪಾಧ್ಯಾಯ ವಿಷ್ಣುಪ್ರಸಾದ್ ನೀಡಿದ ದೂರಿನಂತೆ ನಗರ ಪೊಲೀಸ್ ಠಾಣೆಗೆ ಪ್ರಕರಣ ದಾಖಲಾಗಿದೆ. ದೂರು ಸ್ವೀಕರಿಸಿರುವ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶಿಲನೆ ನಡೆಸಿದ್ದಾರೆ.

Scroll to Top