ಮಾ. 12ರಂದು SDPI ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ರಕ್ತದಾನ ಶಿಬಿರ

(ನ್ಯೂಸ್ ಕಡಬ)newskadaba.com  ಸುಳ್ಯ, ಮಾ.10. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರ,ರೂರಲ್ ಬ್ಲಾಕ್ ಮತ್ತು ನಗರ ಸಮಿತಿ ವತಿಯಿಂದ ರಕ್ತದಾನ ಮಾಸಾಚರಣೆಯ ಪ್ರಯುಕ್ತ ಮಾರ್ಚ್ 12 ರಂದು ರಕ್ತಕೊಟ್ಟು ಬಾಂದವ್ಯ ಕಟ್ಟು ಎಂಬ ಧ್ಯೇಯ ವಾಕ್ಯದೊಂದಿಗೆ ರೋಟರಿ ಕ್ಯಾಂಪ್ಕೋ ರಕ್ತ ನಿಧಿ ಪುತ್ತೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಲಿದೆ.

ಅಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ಸುಳ್ಯದ ಗಾಂಧಿನಗರ ಸಮೀಪದ ಸುಪ್ರೀಂ ಗುರುಂಪು ಎಂಬಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕರಾದ ಅಬ್ದುಲ್ ರಝಾಕ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Scroll to Top