ಅಗ್ನಿಅವಘಡ ➤ ಹೊತ್ತಿ ಉರಿದ ಹಾಸಿಗೆ ಮಳಿಗೆ

(ನ್ಯೂಸ್ ಕಡಬ) newskadaba.com.ಬೆಂಗಳೂರು, ಮಾ. 09.  ಕರ್ಲಾನ್ ಹಾಸಿಗೆ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿ, ಕ್ಷಣಾರ್ಧದಲ್ಲಿ ಇಡೀ ಕಟಡ್ಡವೇ ಹೊತ್ತಿ ಉರಿದ ಘಟನೆ ಸರ್ಜಾಪುರ ಮುಖ್ಯ ರಸ್ತೆಯ ಕೈಕೊಂಡ್ರ ಹಳ್ಳಿ ಬಳಿ ನಡೆದಿದೆ.

 

ಬೆಂಕಿಯ ತೀವ್ರತೆಗೆ ಮಳಿಗೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಜೊತೆಗೆ ಅಕ್ಕಪಕ್ಕದ ಮಳಿಗೆಗಳಿಗೂ ಬೆಂಕಿ ತಗುಲಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

 

Scroll to Top