ಕಾರ್ಕಳ: ಅನಾರೋಗ್ಯ ಹಿನ್ನೆಲೆ..! ➤ ಮನೆನೊಂದು ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಕಾರ್ಕಳ, ಮಾ.04. ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ನಿಟ್ಟೆಯಲ್ಲಿ ನಡೆದಿದೆ.

ಮೃತರನ್ನು ಶಿರೂರು ಕರಾವಳಿ ನಿವಾಸಿ ಶೀಲಾವತಿ ಶೆಡ್ಡಿ ಎಂಬವರ ಮಗಳು ಸೀಮಾ (22) ಎಂದು ಗುರುತಿಸಲಾಗಿದೆ. ಇವರು ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ನಿಟ್ಟೆ ಕಾಲೇಜಿನ ಹಾಸ್ಟೆಲ್ ನಲ್ಲಿದ್ದರು.

ನರ ಹಾಗೂ ಚರ್ಮದ ಸಮಸ್ಯೆಯಿಂದ ಮನನೊಂದು 4-5 ತಿಂಗಳ ಹಿಂದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇದೀಗ ಮತ್ತೆ ಇದೇ ವಿಚಾರದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೇ ಎಂದು ತಿಳಿದುಬಂದಿದೆ.

Also Read  'ಆಧಾರ್' ಪರಿಶೀಲನೆಗೂ ಮುನ್ನ ಜನರ ಒಪ್ಪಿಗೆ ಪಡೆಯಬೇಕು ➤ 'ಪರಿಶೀಲನಾ ಘಟಕ' ಗಳಿಗೆ 'UIDAI' ಖಡಕ್ ಸೂಚನೆ

 

 

 

error: Content is protected !!
Scroll to Top