➤ ಮುಳ್ಳುಹಂದಿ ಹಿಡಿಯಲು ಹೋದ ಇಬ್ಬರು ಯುವಕರು ಮೃತ್ಯು..!

(ನ್ಯೂಸ್ ಕಡಬ) newskadaba.com. ಚಿಕ್ಕಮಂಗಳೂರು. ಫೆ.28.  ಮುಳ್ಳುಹಂದಿ ಹಿಡಿಯಲು ಹೋಗಿದ್ದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ನಡೆದಿದೆ. ಗೊವಿಂದರಾಜು (30) ವಿಜಯ್ ಕುಮಾರ್(29) ಮೃತಪಟ್ಟವರು.

ಮೃತರನ್ನು ತಮಿಳುನಾಡು ಮೂಲದ ನಿವಾಸಿಗಳು ಎಂದು ಗುರುತಿಸಲಾಗಿದ್ದು, ಒಟ್ಟು ನಾಲ್ಕು  ಮಂದಿ ಮುಳ್ಳು ಹಂದಿ ಹಿಡಿಯಲು ಹೋಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದು, ಇನ್ನಿಬ್ಬರು ಸಾವನ್ನಪ್ಪಿದ್ದಾರೆ.

Scroll to Top