➤ 2 ವರ್ಷದ B.Ed ಕೋರ್ಸ್ ಗೆ ಅರ್ಜಿ ಆಹ್ವಾನ!

(ನ್ಯೂಸ್ ಕಡಬ) newskadaba.com. ಬೆಂಗಳೂರು, ಫೆ.15. ಬಿ-ಇಡ್  ಪ್ರವೇಶಾತಿಗಾಗಿ ಕಾಯುತ್ತಿದ್ದರೆ ಇದನ್ನು ಗಮನಿಸಿ. ನೀವು ಮೊದಲು CET ಪರೀಕ್ಷೆ ಬರೆಯಬೇಕಾಗುತ್ತದೆ ಅದಾದ ನಂತರವೇ ನಿಮಗೆ ಪ್ರವಾಶಾತಿ ಆರಂಭವಾಗುತ್ತದೆ. ಕರಾಮುವಿಯಲ್ಲಿ ನೀವು ದೂರ ಶಿಕ್ಷಣ ಪಡೆಯಲು ಬಯಸಿದ್ದರೆ ಇಲ್ಲಿ ಒಂದು ಉತ್ತಮ ಅವಕಾಶ  ನಿಮಗೆಂದೇ ಕಾದಿದೆ.

ಕೋರ್ಸ್  ಪ್ರವೇಶಕ್ಕೆ ಸಿಇಟಿ ಮೂಲಕ ಪ್ರವೇಶಾತಿಯನ್ನು ನೀಡಲಾಗುತ್ತದೆ. ಹಾಗಾಗಿ ಅಭ್ಯರ್ಥಿಗಳು ಬಿ.ಇಡಿ ಕೋರ್ಸ್‌ ಪ್ರವೇಶ ಪಡೆಯಲು ಮೊದಲು ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕು. ಎರಡು ವರ್ಷದ ಬಿ.ಇಡಿ ಕೋರ್ಸ್‌ ಪ್ರವೇಶ ಬಯಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್​ನಲ್ಲಿ  ಈ ಕುರಿತು ಮಾಹಿತಿ ಬಿಡುಗಡೆ ಮಾಡಿದೆ.

Scroll to Top