ಕುಡಿದ ಮತ್ತಿನಲ್ಲಿ ಯುವಕರ ಮಾರಾಮಾರಿ..  

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.12. ಕುಡಿದ ನಶೆಯಲ್ಲಿ ಹೋಟೆಲ್​​​ನಲ್ಲಿ ಮಾರಾಮಾರಿಯಾಗಿರುವ ಘಟನೆ M.S.ರಾಮಯ್ಯ ಆಸ್ಪತ್ರೆ ಬಳಿ ಸಂಭವಿಸಿದೆ.

ಬರ್ತಡೇ ಪಾರ್ಟಿ ಅಚರಣೆಗೆ ಹೋಟೆಲ್​​ಗೆ ಹೋಗಿದ್ದ ಯುವಕರ ಗುಂಪೊಂದು ಬರ್ತಡೇ ಆಚರಣೆ ನಂತರ ಬಿಲ್ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ.  ಹೋಟೆಲ್ ಸಿಬ್ಬಂದಿ ಮತ್ತು ಯುವಕರ ನಡುವೆ ಗಲಾಟೆಯಾಗಿದ ಕಾರಣ ಯಶವಂತಪುರ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

 

error: Content is protected !!
Scroll to Top