ಮಕ್ಕಳನ್ನು ಕತ್ತು ಹಿಸುಕಿ ಕೊಂದ  ಪಾಪಿ ತಂದೆ

(ನ್ಯೂಸ್ ಕಡಬ) newskadaba.com ರಾಯಚೂರು, ಫೆ.12. ಜಿಲ್ಲೆಯ ದೇವದುರ್ಗ ತಾಲೂಕಿನ ಜಕ್ಕಲದೊಡ್ಡಿ ಗ್ರಾಮದಲ್ಲಿ ಪತ್ನಿಯ ಶೀಲಶಂಕಿಸಿ ಮಕ್ಕಳಾದ ಶಿವರಾಜ್(5) ಹಾಗೂ ರಾಜು(3)ನನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ನಡೆದಿದೆ.

ಹೆಂಡತಿ ಪ್ರಭಾವತಿ ಮೇಲೆ ಅನುಮಾನ ಪಡುತ್ತಿದ್ದ ಪತಿ ನಿಂಗಪ್ಪ, ಅಜ್ಜ-ಅಜ್ಜಿಯನ್ನು ಭೇಟಿ ಮಾಡಿಸೋದಾಗಿ  ಮಕ್ಕಳನ್ನು ಕರೆದೊಯ್ದು ಕತ್ತು ಹಿಸುಕಿ ಇಬ್ಬರು ಮಕ್ಕಳನ್ನು ಕೊಂದಿದ್ದಾನೆ. ಮಕ್ಕಳನ್ನು ಕಳೆದುಕೊಂಡ ತಾಯಿಯ ಆಕ್ರಂಧನ ಮುಗಿಲು ಮುಟ್ಟಿದೆ. ಈ ಸಂಭಂದವಾಗಿ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಂದೆ ನಿಂಗಪ್ಪನನ್ನ ಬಂಧಿಸಲಾಗಿದೆ.

Scroll to Top