ಏರ್ ಟೆಲ್ ನಿಂದ ಭರ್ಜರಿ ಆಫರ್

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.24.‌ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಏರ್ ಟೆಲ್ ಹೊಸ ಪ್ರಿಪೇಯ್ಡ್ ಯೋಜನೆ ಪರಿಚಯಿಸಿದ್ದು, 49 ರೂ. ಗೆ 1 ಜಿಬಿ ಡೇಟಾ ನೀಡಲು ಮುಂದಾಗಿದೆ.

49 ರೂ. ಪ್ಲಾನ್ ನಲ್ಲಿ ದಿನವೊಂದಕ್ಕೆ 1 ಜಿಬಿ 4ಜಿ ಡೇಟಾ, ಉಚಿತ ಕರೆ ಸೌಲಭ್ಯವನ್ನು 7 ದಿನಗಳ ಅವಧಿಗೆ ಏರ್ ಟೆಲ್ ನೀಡಿದೆ. ಆದರೆ ಈ ಪ್ಲಾನ್ ಆಯ್ದ ಗ್ರಾಹಕರಿಗೆ ಮಾತ್ರ ಸಿಗಲಿದ್ದು, ಮೈ ಏರ್ ಟೆಲ್ ಆ್ಯಪ್ ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಇನ್ನು ಏರ್ ಟೆಲ್ ಗ್ರಾಹಕರಿಗೆ 98, 99 ಮತ್ತು 146 ರೂ. ಪ್ಲಾನ್ ಗಳನ್ನೂ ಏರ್ ಟೆಲ್ ಪರಿಚಯಿಸಿದೆ. 99 ರೂ. ಪ್ಲಾನ್ ನಡಿ 2 ಜಿಬಿ 4G ಡೇಟಾವನ್ನು 5 ದಿನಗಳವರೆಗೆ ನೀಡಿದೆ. ಇನ್ನು, ಜಿಯೋ 52 ರೂ. ಆಫರ್ ಪ್ರತಿಯಾಗಿ ಗ್ರಾಹಕರಿಗೆ ಏರ್ ಟೆಲ್ 49 ರೂ. ಆಫರ್ ನೀಡಿದೆ.

Also Read  ಮತ್ತೊಂದು ಮೈಲಿಗಲ್ಲಿಗೆ ಸಜ್ಜಾದ ಇಸ್ರೋ - ಮಾನವ ಸಹಿತ ಗಗನಯಾನಕ್ಕೆ ಕ್ಷಣಗಣನೆ

error: Content is protected !!
Scroll to Top