ನಿಮ್ಮ ಮೊಬೈಲ್ ಬ್ಯಾಟರಿ ಹೆಚ್ಚು ಬಾಳಿಕೆ ಬರಬೇಕೆ…? ► ಹಾಗಾದರೆ ಈ ಕೆಲವೊಂದು ಮಾಹಿತಿಗಳನ್ನು ಗಮನಿಸಿ

(ನ್ಯೂಸ್ ಕಡಬ) newskadaba.com ತಂತ್ರಜ್ಞಾನ, ಡಿ.20. ನಾವು ಪ್ರತೀದಿನ ಉಪಯೋಗಿಸುವ ಮೊಬೈಲ್ ಫೋನ್‌ಗಳಲ್ಲಿ ಬ್ಯಾಟರಿ ಚಾರ್ಜ್ ಕಡಿಮೆಯಾಗುತ್ತಿರುವುದು ನಮಗೆ ಪ್ರಮುಖ ಸಮಸ್ಯೆಯಾಗಿದೆ. ಮೊಬೈಲ್ ಫೋನ್ ನಲ್ಲಿನ ಬ್ಯಾಟರಿಯ ಸುದೀರ್ಘ ಬಾಳ್ವಿಕೆಗಾಗಿ ನಾವು ಕೆಲವೊಂದು ಮಾಹಿತಿಗಳನ್ನು ನಮ್ಮ ‘ನ್ಯೂಸ್ ಕಡಬ’ದ ಓದುಗರಿಗಾಗಿ ಹಂಚಿಕೊಳ್ಳುತ್ತಿದ್ದೇವೆ.

1) ಮೊಬೈಲ್ ಚಾರ್ಜಿಂಗ್ ಗಾಗಿ ಅಗ್ಗದ ಮತ್ತು ನಕಲಿ ಚಾರ್ಜರ್ ಅನ್ನು ಬಳಸಬಾರದು.
2) ಸ್ಮಾರ್ಟ್ ಫೋನ್ ಗಳನ್ನು ಚಾರ್ಜ್ ಮಾಡುವಾಗ ಯಾವಾಗಲೂ ಮೂಲ ಚಾರ್ಜರನ್ನು ಬಳಸಿ.
3) ನಕಲಿ ಚಾರ್ಜರನ್ನು ಬಳಸಿದರೆ ಬ್ಯಾಟರಿಯ ಕಾರ್ಯಕ್ಷಮತೆ ಮತ್ತು ಶೇಖರಣಾ ಸಾಮರ್ಥ್ಯ ಎರಡರ ಮೇಲೂ ಪರಿಣಾಮ ಬೀರುತ್ತದೆ.
4) ಮೊಬೈಲನ್ನು ರಾತ್ರಿಯಿಡೀ ಚಾರ್ಜ್ ಇಡಬಾರದು‌. ಚಾರ್ಜ್ ಆದ ಕೂಡಲೇ ಸಂಪರ್ಕವನ್ನು ಕಡಿತಗೊಳಿಸಿ.
5) ಮೊಬೈಲನ್ನು ಹೆಚ್ಚಾಗಿ ವಾಹನಗಳಲ್ಲಿ ಹಾಗೂ ಪವರ್ ಬ್ಯಾಂಕ್ ಮೂಲಕ ಚಾರ್ಜ್ ಮಾಡುವುದರಿಂದ ಮೊಬೈಲ್ ಬ್ಯಾಟರಿ ಕ್ಷೀಣಿಸುವ ಸಂಭವ ಹೆಚ್ಚು.
6) ಮೊಬೈಲ್ ಚಾರ್ಜ್ ಮಾಡುವಾಗ ಸಾಧ್ಯವಾದರೆ ಮೊಬೈಲ್ ಕವರ್ / ಕೇಸ್ ಅನ್ನು ತೆಗೆದು ಚಾರ್ಜ್ ಮಾಡಿ ಯಾಕೆಂದರೆ ಚಾರ್ಜಿಂಗ್ ಸಮಯದಲ್ಲಿ ಮೊಬೈಲ್ ಬ್ಯಾಟರಿ ಸ್ವಲ್ಪ ಬಿಸಿಯಾಗಿರುತ್ತದೆ. ಇದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಮೊಬೈಲ್ನಲ್ಲಿ ದಪ್ಪ ಕವರ್ / ಕೇಸ್ ಇರುವುದರಿಂದ ಕೆಲವೊಮ್ಮೆ ಶಾಖವು ಹೊರಬರುವುದಿಲ್ಲ.

error: Content is protected !!

Join the Group

Join WhatsApp Group