ವಿಧವೆಯನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಯುವಕ ➤ಮನನೊಂದ ಯುವತಿ ಆತ್ಮಹತ್ಯೆಗೆ ಶರಣು!

(ನ್ಯೂಸ್ ಕಡಬ) newskadaba.com, ಶಿವಮೊಗ್ಗ, ಜ.27. ನಗರದ ಅನಿತಾ ಎಂಬಾಕೆ ಕೆಲ ವರ್ಷಗಳ ಹಿಂದೆ ರಾಮಮೂರ್ತಿಯನ್ನ ಮದುವೆಯಾಗಿದ್ದರು.  ಇವರಿಗೆ 13 ವರ್ಷದ ಹೆಣ್ಣು ಮಗಳಿದ್ದಾಳೆ. ಕಳೆದ ಎರಡು ವರ್ಷಗಳ ಹಿಂದೆ ಪತಿ ರಾಮಮೂರ್ತಿ ನಿಧನ ಹೊಂದಿದ್ದು,  ಮಗಳನ್ನು ಸಾಕಲು ಅನಿತಾ ಶಿವಮೊಗ್ಗದ ಗಾರ್ಡ್​ನ್ ಏರಿಯಾದ  ಚುಂಚಾದ್ರಿ ಮಹಿಳಾ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿಕೊಂಡಿದ್ದಳು.

ಈ ನಡುವೆ ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಾಗೇಂದ್ರ ಎನ್ನುವ ಚಾಲಕನ ಜೊತೆ ಪರಿಚಯವಾಗಿ ಇದು ಪ್ರೇಮಕ್ಕೆ ತಿರುಗಿತ್ತು. ವಿಧವೆಗೆ ಬಾಳು ಕೊಡುತ್ತೇನೆಂದು ನಂಬಿಸಿ ಮೋಸ ಮಾಡಿದ್ದಾನೆ. ಈ ಕಾರಣಕ್ಕೆ ಅನಿತಾ ಮನನೊಂದು ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ಫ್ಯಾನ್​ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈಕೆಯ ಮಗಳು ಹೆತ್ತವರನ್ನು ಕಳೆದುಕೊಂಡು ಅನಾಥವಾಗಿದ್ದಾಳೆ.

Scroll to Top