ಯೂಟ್ಯೂಬ್ ವಿಡಿಯೋ ಪ್ರಯೋಗ ಮಾಡಲು ಹೋಗಿ ಬಾಲಕಿ ಆತ್ಮಹತ್ಯೆ..??



(ನ್ಯೂಸ್ ಕಡಬ) newskadaba.com ಉಡುಪಿ, ಜ. 16. ವಿದ್ಯಾರ್ಥಿನಿಯೋರ್ವಳು ಯೂಟ್ಯೂಬ್ ನೋಡಿ ಪ್ರಯೋಗ ಮಾಡುತ್ತಿದ್ದ ವೇಳೆ ಮೃತಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ.







ಮೃತ ಬಾಲಕಿಯನ್ನು ಉಡುಪಿಯ ಬ್ರಹ್ಮಗಿರಿಯ ಪ್ರವೀಣ್ ಶೆಟ್ಟಿ ಎಂಬವರ ಪುತ್ರಿ ಮಂಗಳಾದೇವಿ(11) ಎಂದು ಗುರುತಿಸಲಾಗಿದೆ. 6ನೇ ತರಗತಿಯಲ್ಲಿ ಓದುತ್ತಿದ್ದ ಈಕೆ ಯೂಟ್ಯೂಬ್ ನಲ್ಲಿ ಬರುವ ವಿಡಿಯೋಗಳನ್ನು ನೋಡಿ ಅದನ್ನು ಪ್ರಯೋಗ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಳು. ಅದರಂತೆ ಬಾತ್ರೂಮ್ ನಲ್ಲಿ ಬಟ್ಟೆ ಕಟ್ಟಿ ಯಾವುದೋ ಪ್ರಯೋಗ ಮಾಡುವ ವೇಳೆ ಕುತ್ತಿಗೆಗೆ ಬಟ್ಟೆ ಬಿಗಿದುಕೊಂಡು ಮೃತಪಟ್ಟಿದ್ದಾಳೆ ಎನ್ನಲಾಗಿದೆ.






error: Content is protected !!
Scroll to Top