ಮಂಗಳೂರು: ನದಿಗಿಳಿದ ಕಾರು ► ಯುವತಿಯರಿಬ್ಬರು ಅಪಾಯದಿಂದ ಪಾರು



(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.10. ಮರವೂರು ವೆಟೆಂಡ್ ಡ್ಯಾಂ ಬಳಿಯ ರಸ್ತೆಯಲ್ಲಿ ಮಹಿಳೆಯೋರ್ವರು ಅತೀ ವೇಗದಲ್ಲಿ ಚಲಾಯಿಸುತ್ತಿದ್ದ ಕಾರೊಂದು ನದಿಗೆ ಬಿದ್ದ ಘಟನೆ ಭಾನುವಾರದಂದು ನಡೆದಿದೆ.







ಘಟನೆಯಲ್ಲಿ ಎಜೆ ವೈದ್ಯಕೀಯ ಕಾಲೇಜಿನಲ್ಲಿ ಕಲಿಯುತ್ತಿರುವ ಕೇರಳ ಮೂಲದ ವಿದ್ಯಾರ್ಥಿನಿ ಪ್ರತೀಕ್ಷಾ ಮತ್ತು ಬಜಪೆ ಕೊಳಂಬೆ ನಿವಾಸಿ ನಿಶಾ ಆಚಾರ್ಯ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ನದಿಗೆ ಉರುಳುವುದನ್ನು ಕಂಡ ಸ್ಥಳೀಯರು ನದಿಯಿಂದ ಯುವತಿಯರನ್ನು ಮೇಲಕ್ಕೆತ್ತಿ ಪಾರು ಮಾಡಿದ್ದಾರೆ.






error: Content is protected !!
Scroll to Top