ಕಬ್ಬು ಬೆಳೆ ಹಾನಿಯಿಂದ ಸಕ್ಕರೆ ಉತ್ಪಾದನೆ ಕುಸಿತ; ಬೆಲೆ ಏರಿಕೆಗೆ ಎಥೆನಾಲ್ ಕಾರಣವಲ್ಲ ಎಂದ ಕೇಂದ್ರ



(ನ್ಯೂಸ್‌ ಕಡಬ) newskadaba.com,  ಆ.22: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಏರಿಕೆಗೆ ಎಥೆನಾಲ್ ಉತ್ಪಾದನೆ ಕಾರಣ ಎಂಬ ಆರೋಪಗಳನ್ನು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ತಳ್ಳಿಹಾಕಿದೆ. ದೇಶೀಯ ಉತ್ಪಾದನೆಯಲ್ಲಿನ ಇಳಿಕೆ, ಹಬ್ಬದ ಋತುವಿನ ಬೇಡಿಕೆ ಹಾಗೂ ಜಾಗತಿಕ ಪೂರೈಕೆಯ ಬಿಗಿ ಕ್ರಮಗಳೇ ಬೆಲೆ ಏರಿಕೆಗೆ ಕಾರಣ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.







ಎಥೆನಾಲ್ ಉತ್ಪಾದನೆಗೆ ಬಳಸುವ ಸಕ್ಕರೆಯ ಪ್ರಮಾಣವು 2022-23ರಲ್ಲಿ ಶೇ. 12 ರಷ್ಟಿದ್ದು, 2025-26ರ ಋತುವಿನಲ್ಲಿ ಶೇ. 9ಕ್ಕೆ ಇಳಿಕೆಯಾಗಿದೆ. ಅಲ್ಲದೆ, ದೇಶದ ಒಟ್ಟು ಎಥೆನಾಲ್ ಉತ್ಪಾದನೆಯ ಕಾಲು ಭಾಗ ಮೆಕ್ಕೆಜೋಳದಂತಹ ಧಾನ್ಯಗಳಿಂದ ಸರಬರಾಜಾಗುತ್ತಿದೆ.






ಈ ಋತುವಿನಲ್ಲಿ 34.3 ದಶಲಕ್ಷ ಟನ್ ಸಕ್ಕರೆ ಉತ್ಪಾದನೆಯ ನಿರೀಕ್ಷೆಯಿತ್ತು. ಆದರೆ, ಬೆಳೆ ರೋಗ, ಕೀಟ ಬಾಧೆ ಹಾಗೂ ಅತಿಯಾದ ಮಳೆಯಿಂದಾಗಿ ಕಬ್ಬು ಹಾನಿಗೊಳಗಾಗಿ ಉತ್ಪಾದನೆ 30.6 ದಶಲಕ್ಷ ಟನ್‌ಗೆ ಕುಸಿದಿದೆಬೆಲೆ ಏರಿಕೆ ನಿಯಂತ್ರಿಸಲು ಮತ್ತು ಲಭ್ಯತೆ ಹೆಚ್ಚಿಸಲು ವ್ಯಾಪಾರಿಗಳ ಮೇಲೆ ಸ್ಟಾಕ್ ಮಿತಿ ವಿಧಿಸಲಾಗಿದೆ ಹಾಪ್ರಸ್ತುತ ದೇಶೀಯ ಅಗತ್ಯಗಳನ್ನು ಪೂರೈಸಲು ಅಗತ್ಯವಿರುವಷ್ಟು ಸಕ್ಕರೆ ದಾಸ್ತಾನು ಲಭ್ಯವಿದೆ ಎಂದು ಸರ್ಕಾರ ಭರವಸೆ ನೀಡಿದೆ.

error: Content is protected !!
Scroll to Top