ಕಾಸರಗೋಡು: ಪ್ರವಾಸದ ಬಸ್ ಪಲ್ಟಿ ➤ 40 ಕ್ಕೂ ಅಧಿಕ ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ.07.  ಮೈಸೂರುನಿಂದ ಕೇರಳಕ್ಕೆ ಪ್ರವಾಸಕ್ಕೆಂದು ಹೊರಟಿದ್ದ ಬಸ್ಸೊಂದು ಪನತ್ತಡಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚಿ ಬಿದ್ದ ಪರಿಣಾಮ 40 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಕಾಸರಗೊಂಡಿನಲ್ಲಿ ವರದಿಯಾಗಿದೆ.

ಘಟನೆಯಿಂದ ಗಾಯಗೊಂಡವರನ್ನು ಪೂಡಂಕಲ್ಲು ತಾಲೂಕಿನ ಆಸ್ಪತ್ರೆ ಹಾಗೂ ಕಞಂಗಾಡ್ ನಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರಿನ  ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ನ ಸಿಬ್ಬಂದಿಗಳು ಕೇರಳದ ರಾಣಿಪುರಕ್ಕೆ ತೆರಳುತ್ತಿದ್ದಾಗ ಈ ಅಪಘಡ ಸಂಭವಿಸಿದೆ ಎನ್ನಲಾಗಿದೆ. ಬಸ್ಸಿನಲ್ಲಿ 49 ಮಂದಿ ಪ್ರಯಾಣಿಕರಿದ್ದರೆನ್ನಲಾಗಿದೆ. ಬಸ್ಸಿನಲ್ಲಿ ಸಿಲುಕಿದವರನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಸಾಗಿಸಲಾಯಿತು.

Also Read  ಮಹಿಳಾ ಇಂಜಿನಿಯರ್ ಗೆ ಲೈಂಗಿಕ ಕಿರುಕುಳ ಆರೋಪ ಹಿರಿಯ ಇಂಜಿನಿಯರ್ ಸಸ್ಪೆಂಡ್

error: Content is protected !!
Scroll to Top