ಯು.ಟಿ. ಖಾದರ್ ಗೆ ನಕಲಿ ಹೆಸರಲ್ಲಿ ಕರೆ, ಸಂದೇಶ ➤ ಕಮಿಷನರ್ ಗೆ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 02. ಮಾಜಿ ಶಾಸಕ ಯು.ಟಿ ಖಾದರ್ ಅವರ ಮೊಬೈಲ್ ಗೆ ನಕಲಿ ಕರೆ ಹಾಗೂ ಸಂದೇಶ ಬಂದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಶಾಸಕ ಯು.ಟಿ ಖಾದರ್ ಅವರು ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ ಕುರಿತು ವರದಿಯಾಗಿದೆ.


ತಾನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮಧ್ಯಾಹ್ನ 1.33ರ ಸುಮಾರಿಗೆ 7996664000 ಸಂಖ್ಯೆಯ ಮೊಬೈಲ್‌ನಿಂದ ಎರಡು ಬಾರಿ ಕರೆ ಬಂದಿತ್ತು, ಆದರೆ ಕರೆ ಸ್ವೀಕರಿಸಿರಲಿಲ್ಲ. ಬಳಿಕ ಸಭೆ ಮುಗಿಸಿ ಮೊಬೈಲ್‌ ನೋಡಿದಾಗ ಇದರಲ್ಲಿ ಅದರಲ್ಲಿ ಕಾಲ್‌ ಮಿ ಎಂದು ಬರೆದಿತ್ತು. ಈ ಮೊಬೈಲ್ ಸಂಖ್ಯೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹೆಸರಿನಲ್ಲಿ ಸೇವ್‌ ಮಾಡಲಾಗಿತ್ತು ಎಂದು ಟ್ರೂಕಾಲರ್‌ನಲ್ಲಿ ವೀಕ್ಷಿಸಿದಾಗ ತಿಳಿದಿದೆ. ಈ ಬಗ್ಗೆ ಕಾಲ್‌ ಮಾಡಿದವರು ಯಾರು ಮತ್ತು ಯಾಕಾಗಿ ಮಾಡಿದರು ಎಂದು ತಿಳಿಯಲು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಯು ಟಿ ಖಾದರ್ ಅವರು ಕಮಿಷನರ್‌ ಅವರಿಗೆ ದೂರು ನೀಡಿದ್ದಾರೆ.

Scroll to Top