ಬಂಟ್ವಾಳ: ಪಾದಾಚಾರಿ ಮಹಿಳೆಗೆ ಬೈಕ್ ಢಿಕ್ಕಿ- ಮೃತ್ಯು



(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 25. ಪಾದಾಚಾರಿ ಮಹಿಳೆಯೋರ್ವರಿಗೆ ಬೈಕ್ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ರವಿವಾರ ಸಂಜೆ ಬಿ.ಸಿ.ರೋಡು- ಪುಂಜಾಲಕಟ್ಟೆ ಹೆದ್ದಾರಿಯ ನಾವೂರು ಗ್ರಾಮದ ಫರ್ಲಾದಲ್ಲಿ ಭಾನುವಾರದಂದು ನಡೆದಿದೆ.







 


ಮೃತ ಮಹಿಳೆಯನ್ನು ನಾವೂರು ಗ್ರಾಮದ ಸೂರ ಕ್ವಾಟ್ರಸ್‌ ನಿವಾಸಿ ಉಮಾವತಿ(58) ಎಂದು ಗುರುತಿಸಲಾಗಿದೆ. ಇವರು ರವಿವಾರ ಸಂಜೆ ಮನೆಗೆ ತೆರಳುವುದಕ್ಕೆ ರಸ್ತೆ ದಾಟುತ್ತಿದ್ದ ವೇಳೆ ಬೈಕ್‌ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top