ವಿಟ್ಲ: ಜುಗಾರಿ ಅಡ್ಡೆಗೆ ದಾಳಿ ► ಕೆಲವರ ಬಂಧನ, ಹಲವರು ಪರಾರಿ



(ನ್ಯೂಸ್ ಕಡಬ) newskadaba.com ವಿಟ್ಲ, ನ.24. ಇಲ್ಲಿಯ ಶಾಲಾ ರಸ್ತೆ ಬಳಿ ನಡೆಯುತ್ತಿದ್ದ ಅಂದರ್-ಬಾಹರ್ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ವಿಟ್ಲ ಪೊಲೀಸರು ಮೂವರು ಆರೋಪಿಗಳ ಸಹಿತ ಒಂದು ಪಿಕಪ್ ವಾಹನ, ನಾಲ್ಕು ಬೈಕ್ ಗಳು ಹಾಗೂ ನಗದುಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.







ಇನ್ನುಳಿದ ಎಂಟಕ್ಕೂ ಅಧಿಕ ಆರೋಪಿಗಳು ಪರಾರಿಯಾಗಿದ್ದಾರೆ. ಚಂದ್ರಶೇಖರ್ ಚಂದಳಿಕೆ, ರಮೇಶ್ ಕಡಂಬು, ಮುರಳೀಧರ ಅಪ್ಪರಿಪಾದೆ ಬಂಧಿತ ಆರೋಪಿಗಳು. ರಫೀಕ್ ಕಡಂಬು, ಅಶ್ರಪ್ ಕಡಂಬು, ಪದ್ಮನಾಭ ಬಸವನಗುಡಿ, ಸುರೇಶ್ ನೆಕ್ಕರೆಕಾಡು, ಪ್ರಶಾಂತ್ ಗೌಡ ಕಡಂಬು, ಅಂತೋನಿ ಉಕ್ಕುಡ ಮೊದಲಾದವರು ಸ್ಥಳದಿಂದ ಪರಾರಿಯಾಗಿದ್ದಾರೆಂದು ವಿಟ್ಲ ಎಸೈ ನಾಗರಾಜ್ ತಿಳಿಸಿದ್ದಾರೆ.






ವಿಟ್ಲದ ಶಾಲಾ ರಸ್ತೆಯ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಜುಗಾರಿ ಆಟದಲ್ಲಿ ನಿರತರಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಟ್ಲ ಎಸೈ ನಾಗರಾಜ್ ನೇತೃತ್ವದ ತಂಡ ಪೊಲೀಸ್ ತಂಡ ದಾಳಿ ನಡೆಸಿದೆ. ಬಂಧಿತರಿಂದ ಪರಾರಿಯಾಗಿರುವ ಆರೋಪಿಗಳ ಮಾಹಿತಿ ಸಂಗ್ರಹ ಮಾಡಿ ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top