ಆಸ್ಪತ್ರೆ ಕಟ್ಟಡದಲ್ಲಿ ಅಗ್ನಿ ಅಪಘಡ ➤ ಓರ್ವ ಮೃತ್ಯು ಹಾಗೂ 11 ಜನರಿಗೆ ಗಾಯ

(ನ್ಯೂಸ್ ಕಡಬ) newskadaba.com ಮುಂಬೈ , ಡಿ 19 :  ಮುಂಬೈ ನಗರದ ಘಾಟಕೋಪರ್ ಪ್ರದೇಶದ ವಿಶ್ವಾಸ್ ಕಟ್ಟಡದಲ್ಲಿ ಬೆಂಕಿ ಅಪಘಡದಲ್ಲಿ ಸಂಭವಿಸಿದೆ. ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದು,  ನಾಲ್ವರು ಪೊಲೀಸರು ಸೇರಿದಂತೆ 11 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮೃತಪಟ್ಟವರನ್ನು ಕುರ್ಷಿ ದೇಧಿಯಾ ಎಂದು ಗುರುತಿಸಲಾಗಿದೆ. ಕಟ್ಟಡದಲ್ಲಿಯ ಪಿಝ್ಝಾ ಸೆಂಟರ್ನಲ್ಲಿ ಈ ಬೆಂಕಿ ಹೊತ್ತಿಗೊಂಡಿದೆ. ತೆರವು ಕಾರ್ಯಾಚರಣೆಯಲ್ಲಿ ನೆರವಾಗಿದ್ದ ಪೊಲೀಸ್ ಸಿಬ್ಬಂದಿಗಳನ್ನು ಹಾಗೂ ಹೊಗೆಯಿಂದ ಅಸ್ವಸ್ಥಗೊಂಡವರನ್ನು ಸಮೀಪದ ರಾಜಾವಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಮ್ಲಜನಕವನ್ನು ನೀಡಲಾಗಿದೆ. ಹಾಗೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಂದು ತಿಳಿದು ಬಂದಿದೆ.

Also Read  ರಾಮಕುಂಜ ಗ್ರಾಮ ಪಂಚಾಯತ್ ► "ಗಾಂಧಿ ಗ್ರಾಮ ಪುರಸ್ಕಾರ"

error: Content is protected !!
Scroll to Top