ರಾಜ್ಯದಲ್ಲಿ ಮತ್ತೆ 14 ಮಂದಿಗೆ ಕೋವಿಡ್ ಸೋಂಕು

(ನ್ಯೂಸ್ ಕಡಬ) newskadaba.com ಬೆಂಗಳೂರು ಡಿ. 17. ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದು, ಶುಕ್ರವಾರ 14 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 36 ಮಂದಿ ಗುಣಮುಖರಾಗಿದ್ದಾರೆ.

 

ಸೋಂಕಿತರ ಪೈಕಿ ಬೆಂಗಳೂರು 10, ದಕ್ಷಿಣ ಕನ್ನಡ 2 ಹಾಗೂ ಚಿಕ್ಕಬಳ್ಳಾಪುರದಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. 27 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. 20 ತಿಂಗಳ ಬಳಿಕ ಕನಿಷ್ಟ ಪ್ರಕರಣಗಳು ಪತ್ತೆಯಾಗಿದ್ದವು. ಈಗ ಮತ್ತೆ ಏರಿಕೆಯಾಗಿದೆ.

Scroll to Top