ನೀರಾನೆ ಬಾಯಿಯಿಂದ ಬದುಕಿಬಂದ ಪುಟ್ಟ ಪೋರ.. !

(ನ್ಯೂಸ್ ಕಡಬ) newskadaba.com ಉಗಾಂಡ, ಡಿ. 17. ಹಸಿದ ನೀರಾನೆಯೊಂದು 2 ವರ್ಷದ ಬಾಲಕನ್ನು ನುಂಗುತ್ತಿದ್ದಾಗ ದಾರಿಹೋಕನ ಕಲ್ಲೇಟಿಗೆ ಹೆದರಿ ಮಗುವನ್ನು ಹೊರ ಉಗುಳಿದ ಘಟನೆ ಆಫ್ರೀಕಾದ ಉಗಾಂಡದಲ್ಲಿ ನಡೆದಿದೆ.

 

ಕಾಡಿನಿಂದ ಬಂದ ನೀರಾನೆಯೊಂದು ರಸ್ತೆಯಲ್ಲಿ ಆಡುತ್ತಿದ್ದ 2 ವರ್ಷದ ಮಗುವನ್ನು ಬಾಯಿಯಲ್ಲಿ ಕಚ್ಚಿ ಇನ್ನೇನು ನುಂಗಬೇಕು ಅನ್ನುವ ಹೊತ್ತಿನಲ್ಲಿ ಅದೇ ರಸ್ತೆಯಲ್ಲಿ ಬಂದ ವ್ಯಕ್ತಿಯೊಬ್ಬರು ಕಲ್ಲು ಹೊಡೆದ ಪರಿಣಾಮ ಮಗುವನ್ನು ನೀರಾನೆ ಹೊರಕ್ಕೆ ಉಗುಳಿದೆ. ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಗು ಸದ್ಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎನ್ನಲಾಗಿದೆ.

error: Content is protected !!

Join the Group

Join WhatsApp Group