ಬಂಟ್ವಾಳ: ಆಟೋ ರಿಕ್ಷಾ ಅಪಘಾತ ➤ ಮಹಿಳೆ ಗಂಭೀರ



(ನ್ಯೂಸ್ ಕಡಬ) newskadaba.com ಬಂಟ್ವಾಳ,ಡಿ. 15. ಟಿಪ್ಪರ್ ಲಾರಿಯೊಂದು ರಿಕ್ಷಾಕ್ಕೆ ಡಿಕ್ಕಿ‌ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ವೃದ್ದೆ ಗಂಭೀರ ಗಾಯಗೊಂಡು ಉಳಿದ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ  ಬಿ.ಸಿ‌ರೋಡು ಸಮೀಪದ ಮೊಡಂಕಾಪು‌ ಎಂಬಲ್ಲಿ ನಡೆದಿದೆ.








ಗಂಭೀರ ಗಾಯಗೊಂಡ ಮಹಿಳೆಯನ್ನು ಅವ್ವಮ್ಮ ಎಂದು ಗುರುತಿಸಲಾಗಿದೆ. ಇವರು ರಿಕ್ಷಾದಲ್ಲಿ ಪ್ರಯಾಣಿಕರನ್ನು ಕೈಕಂಬ ಕಡೆಯಿಂದ ಮೊಡಂಕಾಪು ಕಡೆಗೆ ಕರೆದೊಯ್ಯುತ್ತಿದ್ದ ವೇಳೆ ಮೊಡಂಕಾಪು ಕಡೆಯಿಂದ ಬಂದ ಟಿಪ್ಪರ್ ಲಾರಿ, ಬಸ್ಸೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಿಕ್ಷಾಕ್ಕೆ ಡಿಕ್ಕಿ ಹೊಡೆದು, ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ರಿಕ್ಷಾ ನುಜ್ಜುಗುಜ್ಜಾಗಿದ್ದು, ರಿಕ್ಷಾದಲ್ಲಿದ್ದ ವೃದ್ಧ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ಉಳಿದಂತೆ ಇವರ ಸಂಬಂಧಿಕರಾದ 6 ವರ್ಷದ ಮಗು ‌ಹಾಗೂ ಇನ್ನಿಬ್ಬರು ಮಹಿಳೆಯರು ಹಾಗೂ ರಿಕ್ಷಾ ಚಾಲಕನಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮೆಲ್ಕಾರ್ ಸಂಚಾರಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top