ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ ನಲ್ಲಿದ್ದ 40 ಲಕ್ಷ ರೂ. ಮೌಲ್ಯದ ಚಿನ್ನ, ಡೈಮಂಡ್ ಆಭರಣ ಕಳವು…!

Theft, crime, Robbery

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 07. ಮುಂಬೈಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಬ್ಯಾಗ್ ನಲ್ಲಿದ್ದ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಡೈಮಂಡ್ ಆಭರಣಗಳನ್ನು ಕಳ್ಳರು‌ ಕಳವು ಮಾಡಿರುವ ಘಟನೆ ವರದಿಯಾಗಿದೆ.

ಮಹಾರಾಷ್ಟ್ರ ಮುಲುಂದು ವೈಶಾಲಿ ನಗರದ ದೀಪಾ ರೈ ಎಂಬವರು ಡಿ.6ರಂದು ನಡೆಯಲಿದ್ದ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂಬೈ ಯ ಪನ್ವೇಲಿನಿಂದ ತಮ್ಮ ಮನೆಯಾದ ಕಟಪಾಡಿಗೆ ಡಿ.5ರಂದು ತಂದೆ-ತಾಯಿಯ ಜೊತೆ ಮತ್ಸ್ಯಗಂದ ರೈಲಿನಲ್ಲಿ ಉಡುಪಿಗೆ ಹೊರಟಿದ್ದರು. ಜೊತೆಗೆ ಮದುವೆಯಲ್ಲಿ ಧರಿಸುವುದಕ್ಕಾಗಿ ಚಿನ್ನಾಭರಣಗಳನ್ನು 3 ಬ್ಯಾಗ್ ಗಳಲ್ಲಿ ಸೀರೆಯ ಮಧ್ಯ ಭಾಗದಲ್ಲಿ ಸುತ್ತಿಕೊಂಡು ತಂದಿದ್ದರು. ಡಿ.6ರಂದು ಬೆಳಗ್ಗೆ ಸುಮಾರು 5 ಗಂಟೆಗೆ ಕುಂದಾಪುರ ರೈಲ್ವೇ ಸ್ಟೇಷನ್ ತಲುಪಿದ ಇವರು, ಉಡುಪಿಯಲ್ಲಿ ಇಳಿಯಲು ಬ್ಯಾಗ್ ಗಳನ್ನು ರೈಲಿನ ಬಾಗಿಲಿನ ಬಳಿ ತಂದಿರಿಸಿದ್ದರು. ರೈಲು ಮುಂಜಾನೆ 5.40 ಗಂಟೆಗೆ ಉಡುಪಿ ರೈಲು ನಿಲ್ದಾಣಕ್ಕೆ ಬಂದಿದ್ದು, ಬಳಿಕ ರೈಲಿನಿಂದ ಇಳಿದು ಕಟಪಾಡಿಯ ಮನೆಗೆ ಹೋಗಿ ಬ್ಯಾಗ್ ಪರಿಶೀಲಿಸಿದಾಗ 3 ಬ್ಯಾಗ್ ನಲ್ಲಿಟ್ಟಿರುವ ಚಿನ್ನಾಭರಣಗಳು ಮತ್ತು ಡೈಮಂಡ್ ಆಭರಣಗಳು ಕಳವಾಗಿರುವುದು ಕಂಡು ಬಂದಿದೆ. ಕಳವಾಗಿರುವ ಚಿನ್ನಾಭರಣಗಳ ಅಂದಾಜು ತೂಕ 850 ಗ್ರಾಂ. ಆಗಿದ್ದು, ಒಟ್ಟು ಮೌಲ್ಯ 34 ಲಕ್ಷ ರೂ. ಆಗಬಹುದು ಹಾಗೂ ಕಳವಾದ ಡೈಮಂಡ್ ನ ಮೌಲ್ಯ 6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 40 ಲಕ್ಷ ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top